Ode to the west wind

Join Us on WhatsApp

Connect Here

ರಾತ್ರೋರಾತ್ರಿ ಬಂತು ಭಾರೀ ನೀರು, ಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳು ಓಪನ್.!

WhatsApp
Facebook
Twitter
LinkedIn

ಶಿವಮೊಗ್ಗ ಚಿಕ್ಕಮಗಳೂರು ಸರಹದ್ದಿನಲ್ಲಿರುವ ಭದ್ರಾ ಜಲಾಶಯದ ಒಳಹರಿವು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದ್ದು ರಾತ್ರೋರಾತ್ರಿ ಎಂಜಿನಿಯರ್ ಗಳ ನಿರೀಕ್ಷೆ ಮೀರಿ ನೀರು ಬಂದಿದೆ. ಈಗಾಗಲೇ ಎಡ-ಬಲ ದಂಡೆಗಳ ಮೂಲಕ ನೀರು‌ ಹರಿಸಲಾಗುತ್ತಿದೆ.‌ ಪ್ರಸಕ್ತ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ (ಲೈವ್) ನೀರು ಹರಿದು ಬರುತ್ತಿದ್ದು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ರಾತ್ರಿಯೆಲ್ಲಾ ಒಳಹರಿವಿನ ಮೇಲೆ ನಿಗಾ ಇಟ್ಟಿದ್ದ

ಎಂಜಿನಿಯರ್ ಗಳು ಮಂಗಳವಾರ ಮುಂಜಾನೆ ನಾಲ್ಕೂ ಕ್ರಸ್ಟ್ ಗೇಟ್ ಗಳನ್ನ ಒಂದು ಅಡಿ ಎತ್ತಿ ಆರು ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡುತ್ತಿದ್ದಾರೆ. ಉಳಿದ ಪ್ರವಾಹದ ನೀರು ಎಡ ಹಾಗೂ ಬಲದಂಡೆ ಮೂಲಕ ಈಗಾಗಲೇ ಹರಿಸಲಾಗುತ್ತಿದೆ. ಚಿಕ್ಕಮಗಳೂರು ಭಾಗದಲ್ಲಿ ಮಳೆ ಹೆಚ್ಚೇ ಇದ್ದು, ಇದೇ ತರಹದ ಪರಿಸ್ಥಿತಿ ಮುಂದುವರಿದರೆ ಭದ್ರಾವತಿ ಭಾಗದಲ್ಲಿ ಪ್ರವಾಹಕ್ಕೆ ಜನ ಪರಿತಪಿಸಬೇಕಾಗುತ್ತೆ. ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧಿಕಾರಿಗಳು ಜಲಾನಯನ ಪ್ರದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ. ಭದ್ರಾ ಜಲಾಶಯ ಚಿಕ್ಕಮಗಳೂರು, ಚಿತ್ರದುರ್ಗ ಬಹಳ ಮುಖ್ಯವಾಗಿ ಬಹುತೇಖ ದಾವಣಗೆರೆ ಭಾಗಕ್ಕೆ ಜೀವಾಳವಾಗಿದೆ. ದಾವಣಗೆರೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಭದ್ರಾ ಜಲಾಶಯ ಶಿವಮೊಗ್ಗ ಚಿಕ್ಕಮಗಳೂರು ಗಡಿ ಲಕ್ಕವಳ್ಳಿಯಲ್ಲಿದೆ.

ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ನಿಬಂದನೆಗಳೊಂದಿಗೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ರೈತರು ನೀರು ಸದ್ಭಳಕೆ ಮಾಡಿಕೊಳ್ಳಲು ಕೆಲ ಸೂಚನೆಗಳನ್ನ ಪಾಲಿಸಬೇಕಿದೆ. ಹಾಗಾದರೆ ಅವುಗಳೇನು ಈ ಕೆಳಗಿನಂತಿವೆ.

1. ಪ್ರಸಕ್ತ ಸಾಲಿನಲ್ಲಿ ಭದ್ರಾ ಜಲಾಶಯದ ನೀರಿನ ಸಂಗ್ರಹಣೆ ಹಾಗೂ ನೀರಿನ ಒಳಹರಿವನ್ನು ಆಧರಿಸಿ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು. ಕಾರ್ಯಪಾಲಕ ಇಂಜಿನಿಯರ್‌ರವರು ನಿರ್ಧರಿಸುವ ಆಂತರಿಕ ಸರದಿಯನ್ವಯ ಹರಿಸಲಾಗುವ ನೀರನ್ನು ಉಪಯೋಗಿಸಿಕೊಂಡು ಪ್ರಕಟಿತ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯನ್ನು ಬೆಳೆಯಬೇಕು. ನೀರಿನ ಕೊರತೆಯಿಂದ ಬೆಳೆ ನಷ್ಟವುಂಟಾದಲ್ಲಿ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ.

2. ಚೌಗು ಪ್ರದೇಶದಲ್ಲಿ ಆಂತರಿಕ ಸರದಿಯಂತೆ ನೀರು ಬಿಟ್ಟಾಗ್ಯೂ ಉಳಿದ ಸಮಯದಲ್ಲಿ ಬರುವ ಚೌಗು ಹಾಗೂ ಬಸಿ ನೀರಿನಿಂದ ಬೆಳೆಯನ್ನು ಬೆಳೆಯುವುದಾದರೆ, ಅಂತಹ ಕ್ಷೇತ್ರಗಳನ್ನು ಮಾತ್ರ ನೀರಾವರಿ ಕಾಯ್ದೆ ಮೇರೆಗೆ ಉಲ್ಲಂಘನೆ ಎಂದು ಪರಿಗಣಿಸುವುದಿಲ್ಲ ಹಾಗೂ ಇಂತಹ ಯಾವುದೇ ಪ್ರಕರಣವನ್ನು ನಿರ್ಧರಿಸುವಲ್ಲಿ ನೀರಾವರಿ ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ.

3. ನಿಗಧಿಪಡಿಸಿದ ಕ್ಷೇತ್ರಗಳಲ್ಲಿ ಸೂಚಿತ ಬೆಳೆಗಳನ್ನು ಬೆಳೆದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ 1,05,570 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಬಹುದು. ಒಂದು ವೇಳೆ ಪ್ರಕಟಿತ ಬೆಳೆಗಳಿಗೆ ಬದಲಾಗಿ ಹೆಚ್ಚು ನೀರುಣ್ಣುವ ಭತ್ತ ಹಾಗು ಕಬ್ಬು ಬೆಳೆದರೆ ಪ್ರಕಟಿತ ಬೆಳೆಗಳಿಗೆ ಮತ್ತು ಪ್ರಕಟಿತ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ರೈತರು ಅಧಿಸೂಚಿತ ಬೆಳೆಗಳನ್ನು ನಿಗದಿತ ವಿಸ್ತೀರ್ಣಕ್ಕೆ ಮಾತ್ರ ಬೆಳೆದು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

4. ಭದ್ರಾ ಜಲಾಶಯದ ಮುಖ್ಯ ನಾಲೆ ಮತ್ತು ಶಾಖಾ ನಾಲೆಗಳಲ್ಲಿ ಅಧಿಸೂಚನೆಯಂತೆ ವಿತರಣಾ ನಾಲೆಗಳಲ್ಲಿ ಆಂತರಿಕ ಸರದಿಯ ಮೇರೆಗೆ ಜಲಾಶಯದಲ್ಲಿ ನೀರಿನ ಲಭ್ಯತೆಯನುಗುಣವಾಗಿ ನಿರ್ವಹಣೆಯನ್ನು ಮಾಡಲಾಗುವುದು.

5. ಭದ್ರಾ ಕಾಲುವೆಯಲ್ಲಿ ಹರಿಯಬಿಡುವ ನೀರಿನಲ್ಲಿ ಕುಡಿಯುವ ನೀರಿನ ಅವಲಂಬಿತ ನಗರಗಳ ಹಾಗೂ ಪಟ್ಟಣಗಳ ನೀರಿನ ಬೇಡಿಕೆಯೂ ಸಹ ಸೇರಿಕೊಂಡಿರುತ್ತದೆ.

ಭದ್ರಾ ಜಲಾಶಯದ ಮುಖ್ಯನಾಲೆ ಶಾಖಾ ನಾಲೆಗಳಲ್ಲಿ ಮೇಲೆ ತಿಳಿಸಿದಂತೆ ನೀರನ್ನು ಹರಿಸಲಾಗುವುದು. ವಿತರಣಾ ನಾಲೆಗಳಲ್ಲಿ ಅನುಸರಿಸಬೇಕಾದ ಆಂತರಿಕ ಸರದಿಯನ್ನು ಕಾರ್ಯಪಾಲಕ ಇಂಜಿನಿಯರ್‌ರವರು ನಿರ್ಧರಿಸುತ್ತಾರೆ. ನೀರಾವರಿಯಾಗಲಿರುವ ಸವಿಸ್ತಾರ ಸರ್ವೆ ನಂಬರುಗಳು ಹಾಗೂ ಬೆಳೆಯಬೇಕಾದ ಬೆಳೆಗಳ ವಿವರಗಳನ್ನು ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್‌ರವರು ಪ್ರಕಟಿಸುತ್ತಾರೆ.

ಕರ್ನಾಟಕ ನೀರಾವರಿ ಕಾಯ್ದೆ 1965ರ ಅನ್ವಯ ಬೆಳೆ ಮಾದರಿಯನ್ನು ಉಲ್ಲಂಘಿಸುವವರು, ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು, ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಅನಧಿಕೃತ ನೀರಾವರಿ ಬೆಳೆಗಾರರು ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ. ಹಾಲಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಅನುಸೂಚಿಯಲ್ಲಿ ನಮೂದಿಸಿದ ಕ್ಷೇತ್ರ ಹಾಗೂ ಬೆಳೆಗಳಿಗೆ ಮಾತ್ರ ನೀರು ಒದಗಿಸಲು ಉದ್ದೇಶಿಸಲಾಗಿರುತ್ತದೆ. ಪ್ರಕಟಿತ ಬೆಳೆಗಳನ್ನು ಬೆಳೆಯದೇ. ಬೇರೆ ಬೆಳೆಯನ್ನು ಬೆಳೆದು ಬೆಳೆ ಉಲ್ಲಂಘನೆ ಮಾಡಿ ನಷ್ಟ ಅನುಭವಿಸಿದಲ್ಲಿ ಇದಕ್ಕೆ ಸಂಬಂಧಪಟ್ಟ ರೈತರೇ ಹೊಣೆಗಾರರಾಗಿದ್ದು, ಜಲಸಂಪನ್ಮೂಲ ಇಲಾಖೆಯು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ. ರೈತ ಬಾಂಧವರು ನೀರಿನ ಸದ್ಬಳಕೆಗೆ ಸಹಕಾರ ನೀಡುವುದು.

ಆದ್ದರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ದಿನಾಂಕ:29.07.2024 ರ ರಾತ್ರಿಯಿಂದ ಎಡದಂಡ ಹಾಗೂ ಬಲದಂಡೆ ನಾಲೆಗಳಲ್ಲಿ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗಿದೆ.

You Might Also Like This