ಬೆಂಗಳೂರಿನಿಂದ ಚಿಕ್ಕಮಗಳೂರು ರಾಣಿಝರಿ ಪಾಯಿಂಟ್ಗೆ ಟ್ರೆಕ್ಕಿಂಗ್ ಬಂದಿದ್ದ ಯುವಕ ಕಣ್ಮರೆಯಾಗಿದ್ದು ಪೋಷಕರಲ್ಲಿ ಆತಂಕ ಮೂಡಿಸಿದೆ.
ರಾಣಿಝರಿ ಪಾಯಿಂಟ್ ನಲ್ಲಿ ಬೈಕ್ ನಿಲ್ಲಿಸಿ ಮಾಯವಾಗಿರೋ ಭರತ್ ಎಂ, ಎಂಬಾತ ಗುಡ್ಡದ ತುದಿಯಲ್ಲಿ ಟೀ ಶರ್ಟ್, ಮೊಬೈಲ್, ಚಪ್ಪಲಿ ಬಿಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಗುಡ್ಡದಲ್ಲಿರೋ ರಾಣಿಝರಿ ಪಾಯಿಂಟ್ ಗೆ ಪ್ರವಾಸ, ಟ್ರೆಕ್ ಮಾಡಲು ಸಾಕಷ್ಟು ಜನ ಬರುತ್ತಾರೆ.

ಬಿ.ಇ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭರತ್ ಗುರುವಾರ ಇಲ್ಲಿಗೆ ಬಂದಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಈತ ಕೆಲಸ ಮಾಡುತ್ತಿದ್ದ ಕಂಪನಿ 3 ತಿಂಗಳ ಸಂಬಳ ನೀಡಿ ಕೆಲಸದಿಂದ ತೆಗೆದುಹಾಕಿದೆ. ಬೆಂಗಳೂರಿನಿಂದ ಹಾರ್ನೆಟ್ ಬೈಕ್ ನಲ್ಲಿ ಬಂದಿದ್ದ ಭರತ್, ದುರ್ಗದಹಳ್ಳಿಗೆ ಬಂದಿದ್ದ ಗುರುವಾರದಿಂದಲೇ ಮಿಸ್ಸಿಂಗ್ ಆಗಿದ್ದು, ಮಗನನ್ನ ಹುಡುಕಿ ಬೆಂಗಳೂರಿನಿಂದ ಪೋಷಕರು ಬಂದಿದ್ದಾರೆ.
ಮಿಸ್ ಆದ ಭರತ್ ಗಾಗಿ ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹುಡುಕಾಟ ನಡೆಸಿದ್ದಾರೆ.