ಹಿರಿಯ ಪತ್ರಕರ್ತ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಫೇಸ್ ಬುಕ್ ಪೋಸ್ಟ್,
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿನ್ನೆ ಹೋಗಿದ್ದೆ. ಆಶ್ಚರ್ಯ, ಕಾಡಾನೆಯೊಂದು ದೇವಸ್ಥಾನಕ್ಕೆ ಆಗಮಿಸಿತು. ಆಗ ಸಾಯಂಕಾಲ ಆರು ಗಂಟೆ ಸಮಯ. ಭಕ್ತರು ಯಾರೂ ಇರಲಿಲ್ಲ. ನಾವೇ ನಾಲ್ಕು ಮಂದಿ. ಮಂದಿರದ ಬಾಗಿಲು ಹಾಕುವ ಸಮಯ. ಆ ಕಾಡಾನೆ ಬಾಗಿಲು ಮುರಿದು ಒಳ ನುಗ್ಗಿದರೆ ಏನು ಗತಿ ಎಂದು ಗಾಬರಿಯಾಗಿದ್ದೆ. ನನ್ನ ಸ್ನೇಹಿತರೊಬ್ಬರು ದೇವಾಲಯದ ಒಳಗಿದ್ದರು. ನಾನು ಹೊರಗಿದ್ದೆ. ಆನೆ ದೇಗುಲದ ದ್ವಾರದ ಬಳಿ ಮೂರ್ನಾಲ್ಕು ನಿಮಿಷ ನಿಂತು ಒಳಗೆ ಅಡಿಯಿಡಬಹುದು ಎಂಬ ಆತಂಕವನ್ನು ಸೃಷ್ಟಿಸಿತು. ಸುಮ್ಮನೆ ತಳ್ಳಿದ್ದರೂ ಆ ಬಾಗಿಲು ಲಟಲಟ ಅಂತ ಮುರಿದು ಹೋಗುತ್ತಿತ್ತು. ನಂತರ ನಿಧಾನ ಹಿಂದೆ ಹೆಜ್ಜೆಯಿಟ್ಟು ಹೊರಟು ಹೋಯಿತು. ಯಾರಿಗೆ ಗೊತ್ತು, ದೇವರಿಗೆ ನಮಿಸಲು ಬಂದಿದ್ದರೂ ಬಂದಿರಬಹುದು. ದಾಳಿ ಮಾಡಲು ಬಂತು ಅಂತ ಭಾವಿಸಿದ್ದು ನಾವು. ಆ ಆನೆ ಆಗಾಗ ದೇವಸ್ಥಾನದ ಪ್ರಾಂಗಣದೊಳಗೆ ಬರುವುದಂತೆ. (ಅದೇನೇ ಇರಲಿ, ಅದೇನು ಸಣ್ಣ ಘಟನೆ ಅಂತ ಈಗ ಅನಿಸಬಹುದು, ಒಂದು ವೇಳೆ ಬಾಗಿಲು ಮುರಿದಿದ್ದರೆ… ಹತ್ತಿರದಲ್ಲೇ ಇದ್ದ ನಮ್ಮನ್ನು ಅಟ್ಟಿಸಿಕೊಂಡು ಬಂದಿದ್ದಾರೆ.. ಹಾಗಿಗಿದ್ದರೆ … ಹೀಗಾಗಿದ್ದರೆ… ಅಲ್ಲೊಬ್ಬ ಟಿವಿ ಕೆಮರಾಮನ್ ಇದ್ದಿದ್ದರೆ ಅರ್ಧ ದಿನ ಬ್ರೇಕಿಂಗ್ ನ್ಯೂಸ್ ಮಾಡುತ್ತಿದ್ದ… ಹಾಂ..) ಕೆಲ ಕಾಲ ಆತಂಕ .. ನಂತರ ನಿರಾಳ.. ಒಂದಷ್ಟು ಧನ್ಯತೆ ಕ್ಷಣ…!
