ದಿನಾಂಕ: 30.07.2024 ಸಮಯ ಸಂಜೆ 6.00 ಗಂಟೆಗೆ ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟವು 1811.50 ಅಡಿಗಳನ್ನು ತಲುಪಿದ್ದು, ಪ್ರಸ್ತುತ ಒಳಹರಿವು 92,000 ಕ್ಯೂಸೆಕ್ ಗಳಾಗಿರುತ್ತದೆ. IMD ಮುನ್ಸೂಚನೆಯಂತೆ ಇನ್ನೂ 3 ದಿನಗಳ ವರೆಗೆ ರೆಡ್ ಅಲರ್ಟ್ ನೀಡಲಾಗಿರುತ್ತದೆ. ಹೀಗಾಗಿ ಪ್ರತಿ ದಿನಕ್ಕೆ ಸುಮಾರು 80000 ದಿಂದ 90000 ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆ ಇರುತ್ತದೆ. ಈ ಪರಿಸ್ಥಿತಿಯು ಮುಂದುವರೆದಲ್ಲಿ, ಅಣೆಕಟ್ಟಿನ ಮಟ್ಟವು ದಿನಾಂಕ 31.07.2024 ಸಮಯ 9.00 ಗಂಟೆಗೆ 1814 ಅಡಿಗಳಷ್ಟು ತಲುಪಲಿದೆ.
ಈ ನಿಟ್ಟಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ರೇಡಿಯಲ್ ಗೇಟ್‌ಗಳ ಮೂಲಕ ಕಾರ್ಯಾಚರಣೆ ವಿಧಾನದಂತೆ ದಿನಾಂಕ 01.08.2024 ರ ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭಿಕವಾಗಿ 10000 ಕ್ಯೂಸೆಕ್ ನೀರನ್ನು ಹೊರಬಿಡಲು ಯೋಜಿಸಲಾಗಿದೆ. ಹಾಗೆಯೇ ಒಳಹರಿವಿನ ಆಧಾರದ ಮೇಲೆ ನೀರಿನ ಬಿಡುಗಡೆಯ ಪ್ರಮಾಣವನ್ನು ಹೆಚ್ಚಿಸಲಾಗುವುದು. ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಸಾರ್ವಜನಿಕರಿಗೆ ಪ್ರವಾಹ ಎಚ್ಚರಿಕೆ ಪ್ರಕಟಣೆಯನ್ನು ಈಗಾಗಲೇ ಕೆಪಿಸಿಎಲ್ ಕೈಗೆತ್ತಿಕೊಂಡಿದೆ.
– ಕಾರ್ಯನಿರ್ವಾಹಕ ಅಭಿಯಂತರರು(ಕಾಮಗಾರಿ)ಕಾರ್ಗಲ್, ಕವಿನಿನಿ, ಕಾರ್ಗಲ್.