ಕೊಡಗು: ದುಬಾರೆ ಸಾಕಾನೆ ಶಿಬಿರದಲ್ಲಿ ಆಶ್ರಯ ಪಡೆದಿದ್ದ ನಾಲ್ಕು ತಿಂಗಳ ಮರಿಯಾನೆ ದಿಢೀರನೆ ಮೃತಪಟ್ಟಿದೆ. ತಾಯಿಯಿಂದ ಬೇರ್ಪಟ್ಟು ಐದು ತಿಂಗಳ ಕಾಲ ರೋಧಿಸಿತ್ತು.

ವಿರಾಜಪೇಟೆ ತಾಲೂಕಿನ ಮಲ್ದಾರೆ ಗ್ರಾಮದ ಎಸ್ಟೇಟ್‌ಗೆ ಕಾಡಾನೆಗಳ ಗುಂಪೊಂದು ದಾಳಿ ಇಟ್ಟಿತ್ತು, ಕೆಲ ಗಂಟೆಗಳ ನಂತರ ಗುಂಪು ಮಾಯವಾಗಿ ಮರಿಯಾನೆ ಮಾತ್ರ ತೋಟದ ಕಾರ್ಮಿಕರಿಗೆ ಕಂಡಿತ್ತು. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ಗುಂಪಿಗಾಗಿ ಸಾಕಷ್ಟು ಹುಡಕಾಟ ನಡೆಸಲಾಗಿತ್ತು. ಆದರೆ ಫಲಿಸಲಿಲ್ಲ. ಸರಿಯಾಗಿ ನಡೆದಾಡಲೂ ಆಗದ ಮರಿ ಆನೆಯನ್ನ ಕಂಡು ಜನರು ಸಹ ಕನಿಕರಪಟ್ಟಿದ್ದರು. ನಂತರ ಮೈಲಾಪುರ ಆರ್ಗ್ಯಾನಿಕ ಎಸ್ಟೇಟ್ ಬಳಿ ಕಂಡ ಕಾಡಾನೆ ಗುಂಪು ಹಾಗೂ ದುಬಾರೆ ಬಳಿ ಕಾಡಾನೆ ಗುಂಪಿಗೆ ಸೇರಿಸುವ ಪ್ರಯತ್ನವೂ ಸಫಲವಾಗಲಿಲ್ಲ. ಕಾಡಿಗೆ ಬಿಟ್ಟರೂ ತಾಯಿಗಾಗಿ ಘೀಳಿಡುತ್ತಾ ಅತ್ತಿತ್ತ ಅಲೆದಾಡುತ್ತಾ ಪುನಃ ಜನರ ಬಳಿ ಬರುತ್ತಿತ್ತು. ಕೊನೆಗೆ ದುಬಾರೆ ಕ್ಯಾಂಪ್‌ನಲ್ಲಿಟ್ಟು ಆನೆ ಮರಿಗೆ ವನ್ಯಜೀವಿ ವೈದ್ಯ ಚೆಟ್ಟಿಯಪ್ಪ ಅವರು ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದರು. ತಾಯಿ ನೆನಪಿನಲ್ಲಿ ನಿತ್ರಾಣಗೊಂಡಿದ್ದ ಆನೆ ಮರಿ ಆರೈಕೆ ಮಾಡಿದರೂ ಬದುಕುಳಿಯಲಿಲ್ಲ. ೨೫ ದಿನದ ಮರಿಯಾನೆ ರೋಧನೆ ಮುಗಿದಿದ್ದು ಮೃತಪಟ್ಟಿದೆ. ಅರಣ್ಯಾಧಿಕಾರಿಗಳು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.