ಕಾಫಿನಾಡಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರೇ ಎಚ್ಚರ. ಮೂರು ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ. ದತ್ತಮಾಲಾ ಅಭಿಯಾನ ಹಿನ್ನೆಲೆ, ಪ್ರವಾಸಿಗರಿಗೆ ಮೂರು ದಿನ ಗಿರಿ ಭಾಗ ಬಂದ್
ಮಾಡಲಾಗುತ್ತೆ.
ನವೆಂಬರ್ 4 ರ ಬೆಳಗ್ಗೆ 6 ರಿಂದ ನವೆಂಬರ್ 6 ರ ಬೆಳಗ್ಗೆ 10 ಗಂಟೆ ವರೆಗೆ ಪ್ರವಾಸಿಗರ ಭೇಟಿಗೆ ನಿಷೇಧ
ವಿರುತ್ತದೆ. ದತ್ತ ಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನ ಹಳ್ಳ, ಮಾಣಿಕ್ಯಾಧಾರ, ಗಾಳಿಕೆರೆಗೆ ಪ್ರವೇಶ ನಿಷಿದ್ಧ. ಚಿಕ್ಕಮಗಳೂರಿಗೆ ಬಂದು ಪೊಲೀಸ್ ಹಾಗೂ ಅರಣ್ಯ ಇಲಾಖೆ ಬಿಡ್ತಿಲ್ಲ ಎಂದು ಕೊರಗುವ ಬದಲು ನಿಮ್ಮ ಪ್ರವಾಸದ ದಿನಾಂಕವನ್ನ ಬದಲಿಸಿಕೊಳ್ಳಿ.
ನವೆಂಬರ್ ಮೊದಲ ವಾರ ಮುಳ್ಳಯ್ಯನಗಿರಿಗೆ ಚಳಿಗಾಲದ ಪ್ರವಾಸಕ್ಕೆಂದು ನೂರಾರು ಜನ ಪ್ರತಿದಿನ ಬರುತ್ತಾರೆ.
ಅಕ್ಟೋಬರ್ 30 ರಿಂದ ನವೆಂಬರ್ 5 ರವರೆಗೆ ಮುಳ್ಳಯ್ಯನಗಿರಿ ಭಾಗದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ. ಸುರಕ್ಷತಾ ದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತದಿಂದ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿಷೇಧ ಹೇರಿದೆ.
ಹಾಗಾದರೆ ಮಾಧ್ಯಮ ಪ್ರಕಟಣೆಯಲ್ಲೇನಿದೆ..?
ಚಿಕ್ಕಮಗಳೂರು ತಾಲೂಕು, ಐಡಿ ಪೀಠ, ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸ್ಥಳಕ್ಕೆ ದಿನಾಂಕ ೦೫ರಂದು ಶ್ರೀರಾಮ ಸೇನಾ ಕಾರ್ಯಕರ್ತರು ಆಗಮಿಸುವ ಹಿನ್ನೆಲೆ ಐಡಿ ಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನ ಹಳ್ಳ, ಮಾಣಿಕ್ಯಧಾರ ಹಾಗೂ ಗಾಳಿಕೆರೆ ಪ್ರದೇಶಗಳಿಗೆ ದಿನಾಂಕ ೪ರ ಬೆಳಗ್ಗೆ ಆರು ಗಂಟೆಯಿಂದ ದಿನಾಂಕ ೬ರ ಬೆಳಗ್ಗೆ ೧೦ರವರೆಗೆ ಪ್ರವಾಸಿಗರು ಬರುವುದನ್ನ ನಿಷೇಧಿಸಿದೆ. ಹಾಗೂ ಲಾಂಗ್ ಚಾಸೀಸ್ ವಾಹನಗಳ ಸಂಚಾರವನ್ನೂ ಸಂಪೂರ್ಣ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಲು ಜಿಲ್ಲಾಡಳಿತ ಮನವಿ ಮಾಡಿದೆ