ಮಲೆನಾಡಿನಲ್ಲೂ ಆತಂಕ ಮೂಡಿಸಿದ ಹಸುಗಳ ಚರ್ಮಗಂಟು ರೋಗದ ಬಗ್ಗೆ ಆತಂಕ ಬೇಡ, ರೋಗ ಹತೋಟಿಗೆ ಬಂದಿದೆ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಶಿವಯೋಗಿ ಯಲಿ ಹೇಳುತ್ತಾರೆ.

ಕಾಲು ಬಾಯಿ ರೋಗ ಮೊದಲು ಹಾವೇರಿ ಭಾಗದಲ್ಲಿ ಉಲ್ಭಣವಾದರೂ ಸಹ ಮಲೆನಾಡಿನಲ್ಲಿಯೂ ಹಲವು ವರ್ಷಗಳಿಂದ ಇದೆ. ಮಲೆನಾಡಿನಲ್ಲಿ ಯಾವುದೇ ತೊಂದರೆ ಇರಲಿಲ್ಲ. ಲಸಿಕೆ ಕೂಡ ಇರಲಿಲ್ಲ. ಗೋಟ್ ಫಾಕ್ಸ್ ವ್ಯಾಕ್ಸಿನ್ ( ಕುರಿಗಳಿಗೆ ಹಾಕುವ ಲಸಿಕೆ) ಬಳಸಿ ಈ ರೋಗವನ್ನ ತಡೆಯಲಾಗುತ್ತೆ. ಹಾವೇರಿಯಲ್ಲಿ ಅಧಿಕ ಜಾನುವಾರಗಳಿಗೆ ರೋಗ ಕಂಡು ಬಂದಿದ್ದರಿಂದ ಶಿವಮೊಗ್ಗ – ಹಾವೇರಿ ಗಡಿ ಭಾಗದಲ್ಲಿ ರೋಗ ಸಮಸ್ಯೆ ತಂದಿತ್ತು. ತಕ್ಷಣ ದನಗಳ ಜಾತ್ರೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರಲಾಯಿತು.
ಮಾರಾಟ-ಸಾಗಾಟ ನಿಷೇಧ ಹೇರಿದ್ದರಿಂದ ಹಾವೇರಿ – ಶಿವಮೊಗ್ಗ ಗಡಿಯ ಶಿಕಾರಿಪುರ ಹಾಗೂ ಸೊರಬ ತಾಲೂಕುಗಳಲ್ಲಿಯೇ ರೋಗವನ್ನ ತಡೆಯಲಾಯ್ತು. ಶಿವಮೊಗ್ಗ ಜಿಲ್ಲೆಯ 375 ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಂಡು ಬಂದಿದೆ. ಎರಡೂವರೆ ಸಾವಿರ ರಾಸುಗಳಿಗೆ ರೋಗ ಬಾಧಿಸಿದ್ದು 55 ಜಾನುವಾರುಗಳು ಮೃತಪಟ್ಟಿವೆ. ಹಾವೇರಿ ಜಿಲ್ಲೆಯಲ್ಲಿ ಸಾವಿರಾರು ಹಸುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿವೆ.

ಚರ್ಮಗಂಟು ರೋಗ ವೇಗವಾಗಿ ಹಬ್ಬುತ್ತೆ ಆದರೆ ಜಾನುವಾರಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರೋದ್ರಿಂದ ಬಹುಬೇಗನೇ ರೋಗಕ್ಕೆ ತುತ್ತಾಗುವುದಿಲ್ಲ. ಕಾಲುಬಾಯಿ ರೋಗದಷ್ಟು ಪರಿಣಾಮಕಾರಿ ಅಲ್ಲ. ರೋಗ ಬಂದಾಗ ಜ್ವರ ಬಂದಿರುತ್ತೆ. ಎರಡು ದಿನಗಳ ನಂತರ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಚರ್ಮಗಂಟು ರೋಗದ ಮೇಲೆ ಸಂಶೋಧನೆಯಾಗಿಲ್ಲ ಆದರೆ ಈಗಿರುವ ಔಷಧಿಗಳಿಂದ ನಿಯಂತ್ರಣ ಸಾಧ್ಯ. ಕೆಳ ಹಂತದ ಪಶು ವೈದ್ಯರಿಗೆ ನೇರವಾಗಿ ಹಣ ವರ್ಗಾವಣೆ ಮಾಡಿ ಜಾನುವಾರಗಳ ಚಿಕಿತ್ಸೆಗೆ ತುರ್ತಾಗಿ ಸ್ಪಂದಿಸಲು ಅನುವು ಮಾಡಿಕೊಟ್ಟಿದ್ದೇವೆ. ಮಲೆನಾಡಿನಲ್ಲಿ ಭಯ ಮೂಡಿಸುವ ರೋಗವೇನಲ್ಲ..! ರೋಗವಿದ್ದರೂ ಸಹ ಹಾಲನ್ನ ಬಿಸಿ ಮಾಡಿ ಉಪಯೋಗಿಸಬಹುದು. ರೋಗ ಬಂದಿರೋ ಜಾನುವಾರು ಪಕ್ಕ ಕುರಿ ಕಟ್ಟಿದರೂ ಸಹ ಆ ಕುರಿಗೆ ರೋಗ ಬರೋದಿಲ್ಲ.
ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಸರ್ಕಾರ ಪರಿಹಾರ ನೀಡುತ್ತದೆ. ಕರುಗಳಿಗೆ ಐದು ಸಾವಿರ, ಹಸುಗಳಿಗೆ ಇಪ್ಪತ್ತು ಸಾವಿರ ಹಾಗೂ ಎತ್ತುಗಳಿಗೆ ಮೂವತ್ತು ಸಾವಿರ ಪರಿಹಾರ ಸಿಗುತ್ತೆ. ಶಿವಮೊಗ್ಗ ಜಿಲ್ಲೆಯಲ್ಲಿ 24 ದನಗಳಿಗೆ ಪರಿಹಾರ ನೀಡಲಾಗಿದೆ ಎಂದರು.
ಚರ್ಮಗಂಟು ರೋಗದ ಕುರಿತಾದ ಸಂದರ್ಶನಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.