ಕೊಡಗು ಜಿಲ್ಲೆಯ ಮಾಕುಟ್ಟ ಹಾಗೂ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ವ್ಯಾಪ್ತಿಯಲ್ಲಿ ಮಂಗಳವಾರ ( ಫೆ.28) ಸಂಜೆ ಒಂಟಿ ಸಲಗಕ್ಕೆ ಗಾಯವಾಗಿ ಘೀಳುಡುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಕೂಡಲೇ ಕಾಯೋ೯ನ್ಮುಖರಾಗಿ ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ನೀಡಿದರು.

ಡಿಎಫ್ ಓ AT ಪೂವಯ್ಯ ಮಾಗ೯ದಶ೯ನದಲ್ಲಿ ವನ್ಯಜೀವಿ ವೈದ್ಯರಾದ ಡಾ.ಚಿಟ್ಟಿಯಪ್ಪ, ಡಾ.ಪ್ರಶಾಂತ್, ಶಾಪ್೯ ಶೂಟರ್ ರಂಜನ್, ಮಾಕುಟ್ಟ ವಲಯದ ಅರಣ್ಯ ಸಿಬ್ಬಂದಿಗಳು. ಮತ್ತಿಗೋಡಿನಿಂದ ಸಾಕಾನೆಗಳ ನೆರವು ಪಡೆದು ಗಾಯಾಳು ಸಲಗಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಚಿಕಿತ್ಸೆ ಬಳಿಕ ಗುಣಮುಖವಾದ ಸಲಗ ಮತ್ತೆ ಕಾಡಿನಲ್ಲಿ ವಿಹಾರ ಮಾಡಿದ್ದು, ಅರಣ್ಯ ಇಲಾಖೆ ಕಾಯಾ೯ಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.