Ode to the west wind

Join Us on WhatsApp

Connect Here

ಕಾಡು ಬೆಕ್ಕು ಬೇಟೆಗೆಂದು ಜಿಗಿದು ವಿದ್ಯುತ್ ಶಾಕ್ ನಿಂದ ಕಂಬದ ಮೇಲೆ ಒರಗಿದ ಚಿರತೆ.

WhatsApp
Facebook
Twitter
LinkedIn

ಮೂರು ವರ್ಷ ಪ್ರಾಯದ ಚಿರತೆಯೊಂದು ಕಾಡು ಬೆಕ್ಕನ್ನು ಹಿಡಿಯಲು ಹೋಗಿ ವಿದ್ಯುತ್ ಶಾಕ್ ಗೆ ಮೃತಪಟ್ಟಿದೆ. ಆಹಾರ ಅರಸಿ ಕಂಬ ಏರಿದ ಪರಿಣಾಮ ಚಿರತೆ ಜೊತೆ ಕಾಡು ಬೆಕ್ಕು ಮೃತಪಟ್ಟಿದ್ದು  ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲೂಕಿನ ನೀರ್ನಳ್ಳಿ ಬಳಿಯ ಹುಡ್ಲಮನೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ನೀರ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಹಲವು ತಿಂಗಳಿಂದ ಚಿರತೆ ಓಡಾಟ ನಡೆಸುತಿತ್ತು. ತನ್ನ ಬೇಟೆ ಅರಸಿ ಹೋದ ಸಂದರ್ಭದಲ್ಲಿ ಕಾಡು ಬೆಕ್ಕು ಕಂಡಿದೆ. ಅಟ್ಟಿಸಿಕೊಂಡು ಹೋದಾಗ ‌ಕಾಡು ಬೆಕ್ಕು ವಿದ್ಯುತ್ ಕಂಬ ಏರಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಆದ್ರೆ ವಿದ್ಯುತ್ ಸ್ಪರ್ಶಕ್ಕೆ ಕಾಡು ಬೆಕ್ಕು ಅಲ್ಲಿಯೇ ಅಸುನೀಗಿದೆ.‌ ಇದನ್ನು ಹಿಡಿಯಲು ಬಂದ ಚಿರತೆ ಸಹ ವಿದ್ಯುತ್ ಸ್ಪರ್ಶಿಸಿ ಸಾವು ಕಂಡಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೋಡಿದ್ದು ಪರಿಶೀಲನೆ ನಡೆಸಿದ್ದಾರೆ.

You Might Also Like This