Ode to the west wind

Join Us on WhatsApp

Connect Here

ಕಾಡು ನದಿಗೆ ಜೀವದಾನ ಮಾಡಿದ ಹಾಲಿವುಡ್‌ ನಟ ಇವರು, ನಮ್ಮಲ್ಲೂ ಇದ್ದಾರೆ..!

WhatsApp
Facebook
Twitter
LinkedIn

ಹಾಲಿವುಡ್‌ ನಟ ಲಿಯೋನಾರ್ಡೊ ಡಿಕಾಪ್ರಿಯೋ (Leonardo DiCaprio) ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಅಥವಾ ಕನಿಷ್ಟ ಪಕ್ಷ ಟೈಟಾನಿಕ್‌ ಸಿನಿಮಾ ನೋಡೇ ಇರ್ತೀರಾ. ಸುಮಾರು ಐವತ್ತು ವರ್ಷ ಆಸುಪಾಸಿನ ಈ ನಟ ದಶಕಗಳ ಕಾಲ ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಆದರೆ ಅವರ ಸಿನಿಮಾಕ್ಕೆ ಸಿಕ್ಕ ಖ್ಯಾತಿಗಿಂತಾ ಪ್ರಕೃತಿ ಹಾಗೂ ಪರಿಸರ ಸಂರಕ್ಷಣೆ ಕುರಿತು ತೋರುತ್ತಿರುವ ಆಸಕ್ತಿ ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿದೆ. ಈಗಲೂ ಅವರ Instagram bio ಚೆಕ್‌ ಮಾಡಿ ಅಲ್ಲೊಂದು ಪಿಟೀಷನ್‌ ಲಿಂಕ್‌ ಕಾಣುತ್ತೆ. ಅದರಲ್ಲಿ ಗೋಮಾಂಸ ವಹಿವಾಟು ಅಕ್ರಮದ ವಿರುದ್ಧ ಆನ್‌ಲೈನ್‌ ದೂರು ದಾಖಲು ಮಾಡುವ ಲಿಂಕ್‌ ಸಿಗುತ್ತೆ. ಅಮೇಜಾನ್‌ ಕಾಡು ಹೊತ್ತಿ ಉರಿವಾಗಲೂ ಸಹ ದೇಣಿಗೆ ಸಂಗ್ರಹಿಸಿದ್ದ ಈ ನಟ ಮತ್ತೆ ಸುದ್ದಿಯಲ್ಲಿದ್ದಾರೆ.

ಎರಡು ವರ್ಷಗಳ ಹಿಂದೆ, ತಮ್ಮ ಇನ್ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಅಲ್ಬೇನಿಯಾದ ವಿಯೋಸಾ ನದಿ ( Albanian Vjosa River ) ಬಗ್ಗೆ ಬರೆದುಕೊಂಡಿದ್ದ ಡಿಕಾಪ್ರಿಯೋ, ಯುರೋಪಿನ ಉದ್ದನೆಯ ಕಾಡು ನದಿಯನ್ನ ಸಂರಕ್ಷಿಸಿ ಇಲ್ಲಿರುವ ಪ್ರಾಣಿ ಪ್ರಬೇಧವನ್ನ ಉಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು.

`ಅಲ್ಬೇನಿಯಾದ ವಿಯೋಸಾ ನದಿ ಗ್ರೀಸ್‌ ಪರ್ವತ ಶ್ರೇಣಿಗಳಿಂದ ಅಲ್ಬೇನಿಯಾದ ಆಡ್ರಿಯಾಟಿಕ್‌ ಸಮುದ್ರದವರೆಗೆ ವಿಸ್ತಾರವಾಗಿ ಮುನ್ನೂರು ಕಿಲೋಮೀಟರ್‌ ಹರಡಿಕೊಂಡಿದೆ. ಈ ನದಿ ಜಲವಿದ್ಯುತ್‌, ವಾಣಿಜ್ಯ ಉದ್ದೇಶಿತ ಕೈಗಾರಿಕೆಗಳು ಹಾಗೂ ಸಂಸ್ಕರಣಾ ಘಟಕಗಳಿಂದ ಸಂಪೂರ್ಣ ಮುಕ್ತವಾಗಬೇಕು. ನದಿ ಹರಿವಿನುದ್ದಕ್ಕೂ ಸುಮಾರು ೧,೧೦೦ಕ್ಕೂ ಅಧಿಕ ವನ್ಯಜೀವಿ ಪ್ರಬೇಧಗಳು ನೆಲೆಸಿದ್ದು ಅವೆಲ್ಲಾ ಅಪಾಯದಲ್ಲಿವೆ. ಈ ನದಿ crown of the #BlueHeartofEurope. ಅಲ್ಬೇನಿಯಾ ಜನ ಕಿರೀಟದಂತೆ ಇರುವ ಈ ನದಿಯನ್ನ ಶಾಶ್ವತವಾಗಿ ಸಂರಕ್ಷಣೆ ಮಾಡಿಕೊಂಡರೆ ಈ ದೇಶದ ಮೊದಲ ವೈಲ್ಡ್‌ ರಿವರ್‌ ಪಾರ್ಕ್‌ ಆಗಿ ಉಳಿಯಲಿದೆ ಎಂದು ಬರೆದುಕೊಂಡಿದ್ದರು. ಮಿಲಿಯನ್‌ಗಟ್ಟಲೇ ಫಾಲೋವರ್ಸ್‌ ಇರುವ ಈ ನಟನ ಒಂದು ಪೋಸ್ಟ್‌ ಇಂದು ನದಿಯನ್ನ ಸಂರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಅಲ್ಬೇನಿಯಾ ಸರ್ಕಾರ ಈ ನದಿಯನ್ನ ರಾಷ್ಟ್ರೀಯ ನದಿಯನ್ನಾಗಿ ಘೋಷಿಸಿದೆ. ಈಜಿಪ್ತಿನ ರಣಹದ್ದುಗಳಿಂದ ಹಿಡಿದು ಅಳಿವಿನಂಚಿನಲ್ಲಿದ್ದ ನೀರುನಾಯಿಗಳವರೆಗೆ ಇಂದು ಶಾಶ್ವತ ಆಶ್ರಯ ಸಿಕ್ಕಿದೆ.

ದಶಕದ ಕಾಲ ಎನ್‌ಜಿಓ, ಪರಿಸರಾಸಕ್ತರು ಹೋರಾಟ ನಡೆಸಿದರೂ ಆಗದ ಕೆಲಸ, ನಟನ ಸ್ಪಂದನೆಯಿಂದ ಬಲ ಬಂದಂತಾಯ್ತು. ಸರ್ಕಾರ ಇಲ್ಲಿ ಅಸುರಕ್ಷವಾಗಿದ್ದ ಸ್ಥಳಗಳನ್ನ ಸಂರಕ್ಷಿಸಿಸಲು ಪಣತೊಟ್ಟಿದೆ. ಪರಿಸರ ಪ್ರವಾಸೋದ್ಯಮದ ಮೂಲಕ ಈ ಭಾಗದ ಹಳ್ಳಿಗಳಿಗೂ ಅರಿವು ಮೂಡಿಸಿದೆ. ಲಿಯೋನಾರ್ಡೋ ಡಿಕಾಪ್ರಿಯೋ ಪರಿಸರ ಸಂಬಂಧಿತ ಹೋರಾಟಗಳು ವಿಶ್ವದೆಲ್ಲೆಡೆ ಮೆಚ್ಚುಗೆ ಪಡೆದಿವೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕೋದಷ್ಟೇ ಅಲ್ಲ ಫಂಡ್‌ರೈಸ್‌ ಮಾಡಿ ಹಣಕಾಸು ನೆರವನ್ನೂ ನೀಡುತ್ತಿದ್ಧಾರೆ. ದುರಂತ ಎಂದರೆ ಈ ಸಂತತಿ ನಮ್ಮ ದೇಶದಲ್ಲಿ ಕಡಿಮೆ. ನಿಷೇಧಿತ ಅರಣ್ಯ ಪ್ರದೇಶದಲ್ಲಿ ಜೀಪ್‌ ಡ್ರಿಫ್ಟಿಂಗ್‌ ಮಾಡುವುದು, ಪರಿಸರ ಸೂಕ್ಷ್ಮ ಜಾಗದಲ್ಲಿ ಬಂಗಲೆ ಕಟ್ಟುವುದು, ತೆರಿಗೆ ವಂಚನೆಗೆ ನಕಲಿ ಪ್ರಾಣಿ ಪ್ರಿಯ ಸೋಗಿನಲ್ಲಿ ತಿರುಗುವುದು ಹೆಚ್ಚಿದೆ. ಹಾಲಿವುಡ್‌ ನಟನ ಈ ಆದರ್ಶ ನಿಜಕ್ಕೂ ಅನುಕರಣೀಯ.

You Might Also Like This