ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಸನಕಟ್ಟಿ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದ ಕರಡಿ ಕೊನೆಗೂ ಅಸುನೀಗಿದೆ. ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಎರಡು ಮರಿಗಳನ್ನ ಅಗಲಿ ಮೃತಪಟ್ಟಿದೆ.
ಬಸನಕಟ್ಟಿ ಗ್ರಾಮಕ್ಕೆ ಮರಿಗಳೊಡನೆ ಮೇಯಲು ಬಂದಿದ್ದ ಕರಡಿ ಬಸೀರ್ ಸಾಬ್ ಸೌದತ್ತಿ, ರಜಾಕ್ ಎಂಬುವರ ಮೇಲೆ ಕರಡಿ ದಾಳಿ ಮಾಡಿತ್ತು. ಈ ವೇಳೆ ಕೊಡಲಿಯಲ್ಲಿ ಕರಡಿಗೆ ಬಡಿದಿದ್ದರು. ಹಾಗೆಯೇ ಇಬ್ಬರೂ ಮಾರಣಾಂತಿಕ ದಾಳಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅರಣ್ಯ ಅಧಿಕಾರಿಗಳು ಗಾಯಗೊಂಡು ಕರಡಿ ಶೋಧಿಸಿ ಚಿಕಿತ್ಸೆ ನೀಡಲು ವಿಫಲರಾಗಿದ್ದು ಕರಡಿ ಅಸುನೀಗಿದೆ. ಗಾಯಾಳುಗಳಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇಯಲು ಮರಿಗಳೊಡನೆ ಬಂದಿದ್ದ ಕರಡಿ ಮರಿಗಳಿಗೆ ಅಪಾಯ ಎಂದು ಅರಿತು ದಾಳಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಭಾಗದಲ್ಲಿ ಕರಡಿಗಳು ಮೇವಿಗಾಗಿ ಊರಿನತ್ತ ಧಾವಿಸುವುದು ಮಾಮೂಲಾಗಿದೆ. ಅರಣ್ಯ ಇಲಾಖೆ ಇವ್ಯಾವದರ ಪರಿವೇ ಇಲ್ಲದಂತಿದೆ.